ಮಳೆ ನಿಂತು ಹೋದ ಮೇಲೆ

ಮಿಲನ
ಶ್ರೇಯಾ ಗೋಶಾಲ್
ಜಯಂತ್ ಕಾಯ್ಕಿಣಿ
ಮನೋ ಮೂರ್ತಿ

ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ

ಹೇಳುವುದು ಏನೋ ಉಳಿದು ಹೋಗಿದೆ

ಹೇಳಲಿ ಹೇಗೆ ತಿಳಿಯದಾಗಿದೆ || ಪ ||

ನೋವಿನಲ್ಲಿ ಜೀವ ಜೀವ ಅರಿತ ನಂತರ

ನಲಿವು ಬೇರೆ ಏನಿದೆ ಏಕೀ ಅಂತರ

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ

ಒಂದೇ ಸಾರಿ ನೀ ಕೇಳೆಯಾ ಈ ಸ್ವರ

ಮನಸಲ್ಲಿ ಚೂರು ಜಾಗ ಬೇಕಿದೆ

ಕೇಳಲಿ ಹೇಗೆ ತಿಳಿಯದಾಗಿದೆ ||

ಕಣ್ಣು ತೆರೆದು ಕಾಣುವ ಕನಸೇ ಜೀವನ

ಸಣ್ಣ ಹಠವ ಮಾಡಿದೆ ಹೃದಯ ಈ ದಿನ

ಎದೆಯ ದೂರವಾಣಿಯ ಕರೆಯ ರಿಂಗಣ

ಕೇಳು ಜೀವವೇ ಏತಕೀ ಕಂಪನ

ಹೃದಯವು ಇಲ್ಲಿ ಕಳೆದುಹೋಗಿದೆ

ಹುಡುಕಲೇ ಬೇಕೆ ತಿಳಿಯದಾಗಿದೆ ||